ಕರಿಯ ಹಕ್ಕಿಯೊಂದು ಬಂದು
ಮಧುರಗಾನ ಹಾಡಿತು |
ನನ್ನ ನಯನ ಬೆಳಗಿತು
Posted in kavana, poetry | Leave a Comment »

ಮೇಘ ಮಂಡಲದಿಂದ ಸುರಿದು ಬಂದಿಹಳು….
ಭಾಗಮಂಡಲದಲ್ಲಿ ಜನುಮ ತಾಳಿಹಳೂ….
ಧರೆಗಿಳಿದು ಬಂದಿಹಳು ಕೊಡಗಿನಾ ಕಾವೇರಿ….
ಜೀವನದಿ ಎನಿಸಿಹಳು ಬೆಡಗಿನಾ ಕಾವೇರಿ….
ಧುಮ್ಮಿಕ್ಕಿ ಧುಮುಕುತ್ತ ಹಾಲ್ನೊರೆಯ ಚೆಲ್ಲುತ….
ಜಾತಿ ಭೇದವ ಮೀರಿ ಹರಿದಿಹಳು ಈ ತಾಯಿ….
ಶ್ರೀರಂಗನಾಥನ ಬಳಸಿ ಸುತ್ತಿಹಳು…..
ರೈತ ಜೀವಿಗಳ ಮನದಲ್ಲಿ ನೆಲಸಿಹಳು…..
ಶಿಲ್ಪಿ ಚಾತುರ್ಯಕ್ಕೆ ಮೆಚ್ಚಿ ನಿಂತಿಹಳಲ್ಲಿ…
ಅಭಯ ಮುದ್ರೆಯ ತೋರಿ ಹರಸುತಿಹಳಲ್ಲಿ..
ಧರೆಗೆ ಹಾಸಿಹಳು ಹಸಿರು ಪೀತಾಂಬರವ
ಮನೆಮನೆಯ ಬೆಳಗಿಹಳು ಜ್ಯೋತಿಯಾ ಬೆಳಕಿಂದ
ವನ್ಯ ಮೃಗಗಳಿಗೆಲ್ಲ ಆಶ್ರಯವ ಕೊಟ್ಟಿಹಳು
ಪಕ್ಷಿಧಾಮಗಳನ್ನು ಮಡಿಲಲ್ಲಿ ಇಟ್ಟಿಹಳು
ಕನ್ನಡತಿ ಕಾವೇರಿ ಈ ನಮ್ಮ ತಾಯಿ
ಸಾರಿ ಹೇಳುತಲಿಹಳು ನಮ್ಮವಳು ಎಂದು
(ಈ ಹಾಡನ್ನು ಎರಡು ಬಾರಿ ನೃತ್ಯರೂಪಕವಾಗಿ ಪ್ರದರ್ಶಿಸಲ್ಪಟ್ಟಿದೆ)
Posted in kavana | 2 Comments »
Posted in kavana, poetry | Leave a Comment »

ಕೆಸರುಗದ್ದೆಗಳಲಿ ಉಸಿರ್ ಹಿಡಿದು ದುಡಿಯುತಿಹ
ಬೆವರು ಹನಿಗಳಷ್ಟು ಹಣವ ಸುರಿದು
ಹಸಿರು ತೆನೆಗಳಾ ನೋಡುವಾಹಂಬಲದಿ
ಹಸಿದ ಹೊಟ್ಟೆಯನು ತುಂಬುವಾ ಆಸೆಯಲಿ
ಬಿಸಿಯುಸಿರು ಬಿಡುತಿಹನು
ಅರೆನಗ್ನನಾಗಿ ನಮ್ಮ ರೈತ ಜೀವಿ
Posted in kavana, ರೈತ | Leave a Comment »
ಎತ್ತ ನೋಡಿದರತ್ತ ಗಗನ ಚುಂಬಿತ ಗೋಪುರ
ತಲೆ ಎತ್ತಿ ನಿಂದಿಹವು ಕಲೆಯ ಮೂರ್ತಿವೆತ್ತಾಗಿ
ಗರ್ಭದಲಿ ನಿಂತಿಹಳು ಮಧುರೆ ಮೀನಾಕ್ಷಿ
ಕಾಮಪ್ರದೆಯಾಗಿಹಳು ಈ ಮಧುರೆ ಕಾಮಾಕ್ಷಿ
Posted in Pilgrimage, kavana | Leave a Comment »
Posted in Ganesha, kavana, poetry | Leave a Comment »



