ಅರ್ಪಿತ
March 5, 2007 by prakrithi

ಕುಬ್ಜ ದೇಹದ, ಬೊಜ್ಜು ಹೊಟ್ಟೆಯ
ಮೇಲೊಂದಿರುವುದು ಆನೆಯ ಮುಖವು
ನೋಡಲು ಕಾಣುವ ಹಾಸ್ಯಾಕಾರ
ಆದರು ಆಗಿದ ಪ್ರಣವಾಕಾರ
ವೇಗದಿ ಬರುವನು ಈ ಮಂಗಳಾಕಾರ
ತೋರಲು ಹೃದಯದಿ ಸಾಕ್ಷಾತ್ಕಾರ
ಮೋದಕ ಪ್ರಿಯನು ಬಾಳ ರಸಾಯನ
ಅರ್ಪಿತನವನಿಗೆ ಈ ಕವನ ರಸಾಯನ
Posted in Ganesha, kavana, poetry | No Comments Yet
Leave a Reply