
ಮೇಘ ಮಂಡಲದಿಂದ ಸುರಿದು ಬಂದಿಹಳು….
ಭಾಗಮಂಡಲದಲ್ಲಿ ಜನುಮ ತಾಳಿಹಳೂ….
ಧರೆಗಿಳಿದು ಬಂದಿಹಳು ಕೊಡಗಿನಾ ಕಾವೇರಿ….
ಜೀವನದಿ ಎನಿಸಿಹಳು ಬೆಡಗಿನಾ ಕಾವೇರಿ….
ಧುಮ್ಮಿಕ್ಕಿ ಧುಮುಕುತ್ತ ಹಾಲ್ನೊರೆಯ ಚೆಲ್ಲುತ….
ಜಾತಿ ಭೇದವ ಮೀರಿ ಹರಿದಿಹಳು ಈ ತಾಯಿ….
ಶ್ರೀರಂಗನಾಥನ ಬಳಸಿ ಸುತ್ತಿಹಳು…..
ರೈತ ಜೀವಿಗಳ ಮನದಲ್ಲಿ ನೆಲಸಿಹಳು…..
ಶಿಲ್ಪಿ ಚಾತುರ್ಯಕ್ಕೆ ಮೆಚ್ಚಿ ನಿಂತಿಹಳಲ್ಲಿ…
ಅಭಯ ಮುದ್ರೆಯ ತೋರಿ ಹರಸುತಿಹಳಲ್ಲಿ..
ಧರೆಗೆ ಹಾಸಿಹಳು ಹಸಿರು ಪೀತಾಂಬರವ
ಮನೆಮನೆಯ ಬೆಳಗಿಹಳು ಜ್ಯೋತಿಯಾ ಬೆಳಕಿಂದ
ವನ್ಯ ಮೃಗಗಳಿಗೆಲ್ಲ ಆಶ್ರಯವ ಕೊಟ್ಟಿಹಳು
ಪಕ್ಷಿಧಾಮಗಳನ್ನು ಮಡಿಲಲ್ಲಿ ಇಟ್ಟಿಹಳು
ಕನ್ನಡತಿ ಕಾವೇರಿ ಈ ನಮ್ಮ ತಾಯಿ
ಸಾರಿ ಹೇಳುತಲಿಹಳು ನಮ್ಮವಳು ಎಂದು
(ಈ ಹಾಡನ್ನು ಎರಡು ಬಾರಿ ನೃತ್ಯರೂಪಕವಾಗಿ ಪ್ರದರ್ಶಿಸಲ್ಪಟ್ಟಿದೆ)
tuMba sogasaagide kavana
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
geLeyare,
ide tara, kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !
http://enguru.blogspot.com
- KattEvu kannaDada naaDa, kai joDisu baara !